
3rd April 2025
ಮಲ್ಲಮ್ಮ ನುಡಿ ವಾರ್ತೆ
ಬಾಗಲಕೋಟೆ,ಎ.2-ಜಿಲ್ಲೆಯ ಗುಳೇದಗುಡ್ಡ ಭಾಗದಲ್ಲಿ ಮತ್ತೆ ಚಿರತೆಯ ಹಾವಳಿ ಕಂಡು ಬಂದಿದ್ದು, ಮಂಗಳವಾರ ನಾಯಿಯೊಂದನ್ನು ಹರಿದು ತಿಂದಿರುವ ವಿಷಯವನ್ನು ಅರಣ್ಯ ಇಲಾಖೆ ದೃಢಪಡಿಸಿದೆ.
ಗುಳೇದಗುಡ್ಡ ತಾಲೂಕಿನ ಲಾಯದಗುಂದಿ ವಲಯದಲ್ಲಿ ಚಿರತೆ ದಾಳಿ ಮಾಡಿ ನಾಯಿಯನ್ನು ಹರಿದು ತಿಂದಿದ್ದು, ಜನ ಮತ್ತೆ ಭಯಭೀತರಾಗಿದ್ದಾರೆ.
ನಾಯಿಯನ್ನು ಹರಿದು ತಿಂದಿರುವುದು ಚಿರತೆಯೇ ಎಂದು ಹೇಳಿರುವ ಬಾದಾಮಿ ವಲಯ ಅರಣ್ಯಾಧಿಕಾರಿಗಳು, ಚಿರತೆಯ ಹೆಜ್ಜೆ ಗುರುತು ಮೂಡಿರುವುದು ದೃಢವಾಗಿದೆ ಎಂದಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಗುಳೇದಗುಡ್ಡ ಭಾಗದ ಗುಡ್ಡದಲ್ಲಿ ಚಿರತೆ ದಾಳಿಗೆ ಜಾನುವಾರುಗಳು ಬಲಿಯಾಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.
ಚಿರತೆಯ ಹಾವಳಿಗೆ ಮತ್ತೆ ಜನ ಆತಂಕಗೊAಡಿದ್ದು, ಕೂಡಲೇ ಚಿರತೆಯನ್ನು ಹಿಡಿಯಬೇಕು ಎಂದು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಗ್ಯಾರಂಟಿ ಯೋಜನೆ ಪ್ರಗತಿಯ ಕಿರುಹೊತ್ತಿಗೆ ಬಿಡುಗಡೆ ಜಿಲ್ಲೆಯ 4 ಲಕ್ಷ ಕುಟುಂಬಗಳಿಗೆ ಅನುಕೂಲ-ಸಚಿವ ತಿಮ್ಮಾಪೂರ